Thursday, 29 March 2018

ಸೋರುತಿಹುದು ಫೇಸ್'ಬುಕ್'ನ ಮಾಹಿತಿ.....



ಫೇಸ್ಬುಕ್ನ ಸಂಸ್ಥಾಪಕ  ಮಾರ್ಕ್ ಜುಕರಬರ್ಗ್ರ ಇತ್ತೀಚಿಗೆ “ನಮ್ಮ ಮೇಲೆ ನಿಮ್ಮ ದತ್ತಾಂಶ (ಡೇಟಾ) ಸುರಕ್ಷಿತವಾಗಿಡುವ ಗುರುತರ ಜವಾಬ್ದಾರಿ ಇದೆ. ನಮಗೆ ಹಾಗೆ ಮಾಡಲು ಆಗದಿದ್ದರೆ ನಾವು ಇದಕ್ಕೆ ಲಾಯಕ್ಕೇ ಅಲ್ಲ! ಇದು ಒಂದು ವಿಶ್ವಾಸಘಾತ ಮತ್ತು ಇದರ ಪುನರಾವರ್ತನೆಯಾಗದಂತೆ ನಾವು ಕ್ರಮಕೈಗೊಳ್ಳುತ್ತೇವೆ.” ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ನಮಗೆಲ್ಲ ತಿಳಿದಿರುವಂತೆ, ಫೇಸ್ಬುಕ್ನಲ್ಲಿಯ ನಮ್ಮ ದತ್ತಾಂಶವನ್ನು ಕೇಂಬ್ರಿಜ್ ಎನಲೆಟೀಕಾ ಎಂಬ ಕ೦ಪನಿಯು ನಮ್ಮ ಒಪ್ಪಿಗೆ ಪಡೆಯದೆ ಅನೈತಿಕವಾಗಿ ಮಾರಿಕೊಂಡು ಸಾಮೂಹಿಕ ಸನ್ನಿ ಸೃಷ್ಟಿಸಲು ಬಳಸಿಕೊಳ್ಳುತ್ತಿರುವುದು! ಫೇಸ್ಬುಕ್ನ 5 ಕೋಟಿ ಬಳಕೆದಾರರ ದತ್ತಾಂಶ ಕಳುವಾಗಿದೆ!

ಕೇಂಬ್ರಿಜ್ ಎನಲೆಟೀಕಾದ ಸಹಾಯ ಪಡೆದು ಚುನಾವಣೆಯಲ್ಲಿ ಲಾಭ ಪಡೆಯಲಾಗಿದೆ ಎಂದು ನಮ್ಮ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ, ಪರಸ್ಪರ ಕೆಸೆರೆರಚಾಟದಲ್ಲಿ ನಿರತವಾಗಿವೆ! ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ಬುಕ್ನ ದತ್ತಾಂಶದ ಸಹಾಯದಿಂದಲೇ ಚುನಾವಣೆಯಲ್ಲಿ ಜಯಗಳಿಸಿದರೆಂಬ ಆರೋಪ ಕೇಳಿ ಬರುತ್ತಿದೆ. ಡೊನಾಲ್ಡ್ ಟ್ರಂಪ್ರ ಚುನಾವಣಾ ರಣನೀತಿಕಾರರು ಕೇಂಬ್ರಿಜ್ ಎನಲೆಟೀಕಾದ ಸಹಯೋಗದಿಂದ   ಫೇಸ್ಬುಕ್ನಿಂದ ಕದ್ದ  ದತ್ತಾಂಶದಿಂದ ಟ್ರಂಪ್ ಪರ ನಕಲಿ ವಾತಾವರಣ/ಹವಾ ಸೃಷ್ಟಿಸಿ ಗೆಲುವಿಗೆ ಕಾರಾಣೀಕರ್ತರಾದರೆಂಬುದು ಆರೋಪ. ಇಲ್ಲಿ ನಾವೆಲ್ಲ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಲಾಗ್ಇನ್ ಮಾಡಿದಾಗ, ನಮಗೆ ವಿಶಿಷ್ಟವಾದ ಮಾಹಿತಿ ಪದೇ ಪದೇ (ಫೇಸ್ಬುಕ್ ಅಥವಾ ಟ್ವಿಟರ್) ಕಾಣಿಸಿಕೊಳ್ಳುತ್ತಿರುವದನ್ನು  ನೋಡಿದಾಗ, ಸಾವಿರಾರು ಜನರು ಒಂದೇ ವಿಷಯದ ಕುರಿತು ಹಲವಾರು ಬಾರಿ ತಮ್ಮ ಗೋಡೆಗಳಲ್ಲಿ ಬರೆಯುತ್ತಿದ್ದಂತೆ ಭಾಸವಾಗುತ್ತದೆ. ಇದರಿಂದ ನಮ್ಮ ಮನಸ್ಸಿನಲ್ಲಿ ಒಂದು ವಿಚಿತ್ರ ವಾತಾವರಣದ ಚಿತ್ರಣ ಮೂಡಿ ಮನಸ್ಸು ಆ ವಿಷಯದತ್ತ ವಾಲುತ್ತ ಹೋಗುತ್ತದೆ. ಯಾವಾಗ ಜನರು ಪದೇ ಪದೇ ಗೋಚರಿಸುವ ಇಂಥ ಟ್ವೀಟ್ಗಳನ್ನು ,ಪೋಸ್ಟ್ಗಳನ್ನು ಓದುತ್ತಾರೋ,ಅವರಿಗೆ ಒಬ್ಬ ವ್ಯಕ್ತಿ/ರಾಜಕಾರಣಿ ನಿಜವಾಗಿಯೂ ಜನಪ್ರೀಯತೆಯ ಶಿಖರಕ್ಕೇರುತ್ತಿದ್ದಾನೆಂದು ಭಾಸವಾಗಿ ಅದನ್ನೇ ನಂಬಲು ಪ್ರಾರಂಭಿಸುತ್ತಾರೆ.  ಆದರೆ ಇದೊಂದು ನಕಲಿ ಹವಾ ಸೃಷ್ಟಿಸಿ, ಜನರನ್ನು ಸಾಮೂಹಿಕ ಸನ್ನಿಗೆ ಒಳಪಡಿಸುವ ಪ್ರಯತ್ನವಾಗಿರುತ್ತದೆ.  ಕೇಂಬ್ರಿಜ್ ಎನಲೆಟೀಕಾದ ಪ್ರಮುಖ ನಿವೇಶಕ ರಾಬರ್ಟ್ ಮರ್ಸರ್ ಜಗತ್ತಿನ ಪ್ರಮುಖ ಉದ್ಯೋಗಪತಿಯಾಗಿದ್ದು, ಡೊನಾಲ್ಡ್ ಟ್ರಂಪ್ರ ಸಮರ್ಥಕರೆಂಬುದು ಜಗಜ್ಜಾಹೀರಾಗಿದೆ. ರಾಬರ್ಟ್ ಮರ್ಸರ್ರ ಮೇಲೆ ಎರಡು ಪ್ರಮುಖ ಆರೋಪಗಳಿವೆ. ಮೊದಲೇನೆಯದಾಗಿ 2016ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಅಭಿಪ್ರಾಯವನ್ನು ಪ್ರಾಭಾವಿತಗೊಳಸಿದರೆಂದು ಮತ್ತು ಬ್ರೇಕ್ಸಿಟ್ ಅಂದರೆ ಯುರೋಪ್ದಿಂದ ಬ್ರಿಟನ್ ಹೊರನಡೆವ ಸಂದರ್ಭದಲ್ಲಿ ನಡೆಸಿದ ಜನಮತ ಸಂಗ್ರಹದಲ್ಲಿ ಜನರ ಅಭಿಪ್ರಾಯವನ್ನು ಪ್ರಭಾವಿತಗೊಳಸಿದರೆಂದು. ಈ ಎರಡೂ ಘಟನೆಗಳಲ್ಲಿ ಅವರು ನಕಲಿ ವಾತಾವರಣವನ್ನು ಸೃಷ್ಟಿಸಿದರು, ಜನರಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಟ್ವಿಟರ್ನಲ್ಲಿ ನಕಲಿ ವಾತಾವರಣದ  ಪೋಸ್ಟಗಳು ಪದೇ ಪದೇ  ಕಂಡು ದೇಶದ ಒಲವು ಒಂದು ನಿರ್ದಿಷ್ಟ ದಿಸೆಯಲ್ಲಿ/ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬಲಾರಂಭಿಸುತ್ತಾರೆ ಮತ್ತು ತಾವು ಕೂಡ ಇದೇ ಥೇಯರಿಯನ್ನು ವಿಶ್ವಾಸಾರ್ಹವೆಂದು ತಿಳಿದು ಅದರತ್ತ ಸೆಳೆಯಲ್ಪಡುತ್ತಾರೆ. ಬ್ರಿಟನ್ ಸರ್ಕಾರ ಬ್ರೇಕ್ಸಿಟ್ನಲ್ಲಿ ಕೇಂಬ್ರಿಜ್ ಎನಲೆಟೀಕಾದ ಪಾತ್ರದ ಕುರಿತು ಗಂಭೀರ ತನಿಖೆ ಕೂಡ ನಡೆಸುತ್ತಿದೆ. ಈ ನಾಟಕ ಜಗದ ಬೆಳಕಿಗೆ ಬರುವಂತೆ ಮಾಡಿದ ವಿಸಲ್ ಬ್ಲೋವರ್ ಅಮೇರಿಕದ ಕ್ರಿಸ್ಟೋಫರ್ ವ್ಯಾಲಿ ಎಂಬ ವ್ಯಕ್ತಿ. ಈತ ರಾಬರ್ಟ್ ಮರ್ಸರ್ಕೇಂಬ್ರಿಜ್ ಎನಲೆಟೀಕಾದ ಉದ್ಯೋಗಿಯಾಗಿದ್ದ. ಈತ ಹೇಳುವಂತೆ ಫೇಸ್ಬುಕ್ನ 5 ಕೋಟಿ ಜನರ ದತ್ತಾಂಶ ಆಧರಿಸಿ ದೋನಾಲ್ಡ್ ಟ್ರಂಪ್ರ ಚುನಾವಣಾ ಪ್ರಚಾರವನ್ನು ವಿನ್ಯಾಸಗೊಳಿಸಲಾಯಿತು. 2016ರಲ್ಲಿ ನಡೆದ ಅಮೇರಿಕದ ಚುನಾವಣೆಗಾಗಿ 2014ರಲ್ಲೇ   ಕೇಂಬ್ರಿಜ್ ಎನಲೆಟೀಕಾ ಕಾರ್ಯಪ್ರವೃತ್ತವಾಗಿತ್ತು. ಇದಕ್ಕಾಗಿ ಒಬ್ಬ ಸಂಶೋಧಕ ಮತ್ತು ಮಾನಸಿಕ ತಜ್ಞ ಅಲೆಕ್ಸಾಂಡರ್ ಕೊಗನ್ರ ಸೇವೆ ಪಡೆದು ಅವರಿಗೆ ಲಕ್ಷಗಟ್ಟಲೇ ಡಾಲರ್ಗಳ ಭಾರಿ ಮೊತ್ತವನ್ನು ಸಂದಾಯಿಸಿ, ಫೇಸ್ಬುಕ್ನ ದತ್ತಾಂಶ ಕದಿಯುವ  ಅಪ್ಲಿಕೇಷನ್ನೊಂದನ್ನು  ತಯಾರಿಸಿದ ಆರೋಪ ಕೇಂಬ್ರಿಜ್ ಎನಲೆಟೀಕಾದ ಮೇಲಿದೆ.  ಕೊಗನ್ರ ಈ ಅಪ್ಲಿಕೇಷನ್ನ ಹೆಸರು ಧಿಸ್ ಈಸ್ ಯುವರ್ ಡಿಜಿಟಲ್ ಲೈಫ್”, 270000 ಜನ ಈ ಅಪ್ಲಿಕೇಷನ್ನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಇವರೆಲ್ಲರ ದತ್ತಾಂಶವಷ್ಟೇ ಅಲ್ಲ, ಇವರ ಸ್ನೇಹಿತರ, ಸಂಬಧಿಕರ ಮಾಹಿತಿಯೂ ಕೂಡ ಕದಿಯಲ್ಪಟ್ಟಿತು!

ನಮ್ಮೆಲ್ಲರನ್ನು ಕಾಡುವ ಕೌತುಕ ಹಾಗೂ ಆತಂಕದ ಪ್ರಶ್ನೆ, ಯಾವುದೋ ಅಪ್ಲಿಕೇಶನ್ನೊಂದು ನಮ್ಮ ಖಾಸಗಿ ಮಾಹಿತಿಯನ್ನು ಹೇಗೆ ಕದ್ದು ಸಂಗ್ರಹಿಸಲು ಸಾಧ್ಯ?  ಇದಕ್ಕೆಲ್ಲ ಕಾರಣ ನಮ್ಮ ನಿರ್ಲಕ್ಷ ಮತ್ತು ಅಜಾಗುರಕತೆ. ಯಾರು ಎ೦ಡ್ರೋಯಿಡ್ ಉಪಕರಣಗಳಲ್ಲಿ ಫೇಸ್ಬುಕ್ ಉಪಯೋಗಿಸುತ್ತಾರೋ ಅಂಥವರ ಎಸ್.ಎಂ.ಎಸ್. ಮತ್ತು ಕಾಲ್ ಡಾಟಾದ ವಿವರಗಳನ್ನು ಕಳೆದ ಹಲವು ವರ್ಷಗಳಿಂದ ಸಂಗ್ರಹಿಸಲಾಗುತ್ತಿದೆ! ಫೇಸ್ಬುಕ್ನಲ್ಲಿ ಸಂಪೂರ್ಣ ದತ್ತಾಂಶವನ್ನು ಡೌನ್ಲೋಡ್ ಮಾಡುವ ವಿಕಲ್ಪವಿರುತ್ತದೆ. ವಿಶ್ವಾದ್ಯಂತ ಫೇಸ್ಬುಕ್ ಬಹಳಷ್ಟು ಬಳಕೆದಾರರಿಗೆ ಈ ಡೇಟಾ ಫೈಲ್ನಲ್ಲಿ ತಮ್ಮ ಹಳೆಯ ಕಾಲ್ ಹಿಸ್ಟ್ರಿ ಸಿಕ್ಕಿದೆ! ಫೇಸ್ಬುಕ್ ತನ್ನ ಮೇಸೆಂಜರ್ ಅಪ್ಲಿಕೇಶನ್ ಮುಖಾಂತರ ಈ ಡೇಟಾವನ್ನು ಸಂಗ್ರಹಿಸುತ್ತಿದೆ.ಈ ಮೇಸೆಂಜರ್  ಅಪ್ಲಿಕೇಷನ್  ತನ್ನನ್ನು ಎ೦ಡ್ರೋಯಿಡ್   ಫೋನ್ನ ಡಿಫಾಲ್ಟ್ ಎಸ್.ಎಂ.ಎಸ್. ಅಪ್ಲಿಕೇಷನ್ನಾಗಿಸಲು ನಿರಂತರವಾಗಿ ಬಳಕೆದಾರರ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತದೆ! ಫೇಸ್ಬುಕ್ನಲ್ಲಿ ಬಹಳಷ್ಟು ಗೇಮ್ಸ್ ಮತ್ತು ಕ್ವಿಜ್ಗಳಿರುತ್ತವೆ, ಬಹುತೇಕ ಜನ ಇಂತಹ ಆಟಗಳಲ್ಲಿ ಪಾಲ್ಗೊಳ್ಳತ್ತಾರೆ. ಇಂತಹ ಆಟಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಅಥವಾ ಕ್ವಿಜ್ಗಳಲ್ಲಿ ಭಾಗವಹಿಸುವಾಗ ಮೊಬೈಲ್ ಸ್ಕ್ರೀನ್ ಮೇಲೆ  ಪಾಪ್ಅಪ್ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. ಈ ಪಾಪ್ಅಪ್  ಸಂದೇಶದ ಮುಖಾಂತರ ಅಗುಂತಕ ಅಪ್ಲಿಕೇಷನ್ ನಿಮ್ಮ  ಕೌಟುಂಬಿಕ ದತ್ತಾಂಶವನ್ನು (ಫ್ಯಾಮಿಲಿ ಡೇಟಾ) ಬಳಸಲು ಸಮ್ಮತಿ ಕೇಳುತ್ತದೆ. ಇಂತಹ ಸಂದೇಶಗಳು ಗೇಮ್ನ ಮಧ್ಯೆ ಬಂದಾಗ ಉಂಟಾಗುವ ಕಿರಿಕಿರಿ ಮತ್ತು ಆಟಕ್ಕೆ ಉಂಟುಮಾಡುವ ಭಂಗದಿಂದ ತಪ್ಪಿಸಿಕೊಳ್ಳಲು ಜನರು ಗಡಿಬಿಡಿಯಲ್ಲಿ ಸಂದೇಶವನ್ನು ಓದದೇ ಅರ್ಥಮಾಡಿಕೊಳ್ಳದೇ  ಓಕೆ ಗುಂಡಿಯನ್ನು ಒತ್ತಿ ಬಿಡುತ್ತಾರೆ. ಇದರಿಂದ ನಮ್ಮ ದತ್ತಾಂಶ ಕಳುವಾಗಿ ಯಾರದೋ ಕೈ ಸೇರಿ ಬಿಡುತ್ತದೆ. ಫೇಸ್ಬುಕ್ನಲ್ಲಿ “ನೀವು ಅನ್ಯ ಲಿಂಗಿಗಳಾಗಿದ್ದರೆ ಹೇಗೆ ಕಾಣುತ್ತೀರಿ?, ನೀವು ಯಾವಾಗ ಮತ್ತು ಹೇಗೆ ಸಾವನ್ನಪ್ಪುತ್ತೀರಿ?, 50 ವರ್ಷದ ನಂತರ ನೀವು ಹೇಗೆ ಕಾಣುತ್ತೀರಿ?. ಮುಂದಿನ ಜನ್ಮದಲ್ಲಿ ನೀವು ಎಲ್ಲಿ ಮತ್ತು ಏನಾಗಿ ಹುಟ್ಟುತ್ತೀರಿ?, ಹೋದ ಜನ್ಮದಲ್ಲಿ ನೀವು ಏನಾಗಿದ್ರೀ? ಎಂಬುದನ್ನು ತಿಳಿಯಲು ಲಿಂಕ್ ಒ೦ದನ್ನು ಕ್ಲಿಕ್ಕಿಸಲು ಕೇಳಲಾಗುತ್ತದೆ. ಯಾವಾಗ ಈ ಲಿಂಕ್ಗಳ ಮೇಲೆ ವ್ಯಕ್ತಿ ಕ್ಲಿಕ್ಕಿಸುತ್ತಾನೋ ಆಗ ಆತನ ಫೇಸ್ಬುಕ್ನಲ್ಲಿರುವ ಖಾಸಗಿ ಮಾಹಿತಿ ಥರ್ಡ್ ಪಾರ್ಟಿ ಕಂಪನಿಯೊಂದರ ಕೈಸೇರುತ್ತದೆ. ಆದ್ದರಿಂದ ನಾವು ಇಂತಹ ಕೌತುಕವೆನಿಸಿದರೂ ಅಸಂಬದ್ಧವಾಗಿರುವ ಪ್ರಶ್ನೆಗಳುಳ್ಳ ಅಥವಾ ಆಸೆ ತೋರಿಸುವ ಲಿಂಕ್ಗಳ ಮೇಲೆ ಕ್ಲಿಕ್ಕಿಸದೇ ಇರುವುದು ಒಳಿತು. ಫೇಸ್ಬುಕ್ನ ಮೂಲಗಳು ಹೇಳುವಂತೆ ಅದು ಜನರ ಹೆಸರು ಮತ್ತು ಭಾವಚಿತ್ರವನ್ನು ಮಾತ್ರ  ಸಾರ್ವಜನಿಕಗೊಳಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಇಂತಹ ಅಪ್ಲಿಕೇಷನ್ಗಳ ಜಾಲದಲ್ಲಿ ಸಿಕ್ಕಿಕೊಂಡಾಗ ಆತನ ಖಾಸಗಿ ಮಾಹಿತಿಗಳಾದ, ಐ.ಪಿ.ಅಡ್ರೆಸ್, ಲೋಕೇಶನ್, ಈ ಮೇಲ್ ಐಡಿ, ಜನ್ಮ ದಿನಾಂಕ,ಫೋನ್ ನಂಬರ್ ಹಾಗೂ ಇತರೆ ದತ್ತಾಂಶಗಳು ಮೂರನೆಯ ವ್ಯಕ್ತಿ/ಕಂಪನಿಯ ಕೈ ಸೇರಿ ಬಿಡುತ್ತವೆ.  ಉದ್ದೇಶಪೂರ್ವಕವಾಗಿಯೇ ಕೇಂಬ್ರಿಜ್  ಎನಲೆಟೀಕಾ ಮತ್ತು ಅದಕ್ಕೆ  ಸಂಬಧಿಸಿದ ಅಪ್ಲಿಕೇಷನ್ಗಳಿಗೆ ಜನರ  ಖಾಸಗಿ ಮಾಹಿತಿಯನ್ನು ಒದಗಿಸಿದ ಆರೋಪ  ಫೇಸ್ಬುಕ್   ಮೇಲಿದೆ. ಫೇಸ್ಬುಕ್ ಬಳಕೆದಾರರ ದತ್ತಾಂಶ/ಮಾಹಿತಿಯನ್ನು  ಕದಿಯಲು ಮಾನಸಿಕ ತಜ್ಞ   ಅಲೆಕ್ಸಾಂಡರ್ ಕೊಗನ್ರ ಕಂಪನಿ ಗ್ಲೋಬಲ್ ಸೈನ್ಸ್ ರಿಸರ್ಚ್  ಜನರಿಗೆ  ಸಮೀಕ್ಷೆಯೊಂದರಲ್ಲಿ  ಭಾಗವಹಿಸಲು ಹಣದ ಪ್ರಲೋಭನೆ ನೀಡಿತ್ತು. ಹೀಗೆ ಕದ್ದ ಮಾಹಿತಿಯನ್ನು ಕೇಂಬ್ರಿಜ್ ಎನಲೆಟೀಕಾಗೆ ನೀಡಲಾಯಿತು. ಈ ಮಾಹಿತಿಯ ಮುಖಾಂತರ ಆಯಾ  ಭಾಗದ ಜನರ ಭಾವನೆ, ಆಚಾರ ವಿಚಾರ,ಅಭಿರುಚಿ, ವಿವಿಧ ವಿಷಯಗಳ ಕುರಿತ ಆಸಕ್ತಿ, ಆ ಜನ ಬಹುವಾಗಿ ಚರ್ಚಿಸುವ ವಿಷಯಗಳು,ಪ್ರಮುಖ ವಿಚಾರಗಳು, ಅವರ ಮನಸ್ಸಿಗೆ ಭಾವನಾತ್ಮಕವಾಗಿ ಹತ್ತಿರವಾದ ವಿಷಯಗಳು, ಜನರ ಲೈಕ್ಸ್ ಮತ್ತು ಡಿಸ್ಲೈಕ್ಸ್,ಜನತೆಯಮ ಮನೋವೈಜ್ಞಾನಿಕ ಪಾಶ್ವಚಿತ್ರ (ಪ್ರೊಫೈಲ್),  ಜನತೆಯನ್ನು ಪ್ರಭಾವಿತಗೊಳಿಸುವ ವಿಷಯಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ, ಜನತೆಯ ಬ್ರೈನ್ ಮ್ಯಾಪಿಂಗ್ ಮಾಡಿ ಅದನ್ನು  ವಿಶ್ಲೇಷಿಸಿ ಅದಕ್ಕನುಗುಣವಾಗಿ ತನ್ನ ಕಕ್ಷಿದಾರರಿಗೆ ಅನುಕೂಲವಾಗುವ0ತೆ ಸಾಮಾಜಿಕ ಜಾಲತಾಣಗಳ ತಂತ್ರಾಂಶಗಳನ್ನು ತಿರುಚಿ ಉಪಯೋಗೋಸಿಕೊಳ್ಳಲಾಯಿತು. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 5ಕೋಟಿ ಜನರ ಈ ರೀತಿಯ ಮಾಹಿತಿಯನ್ನು ಕದ್ದು ಡೊನಾಲ್ಡ್ ಟ್ರಂಪ್ರ ಪ್ರಚಾರ ತಂತ್ರವನ್ನು ವಿನ್ಯಾಸಗೊಳಿಸಲಾಯಿತು! ರೇಡಿಯೋ ಅಥವಾ ಟಿ.ವಿ.ಯಲ್ಲಿ  ರಾಜಕೀಯ ಜಾಹಿರಾತುಗಳು ಪ್ರಸಾರವಾದರೆ ಅವು ಇಡೀ ದೇಶದ ಜನತೆಗೆ ಒಂದೇ ತೆರನಾಗಿರುತ್ತವೆ. ಆದರೆ ಈ ರೀತಿ ಕದ್ದ ಮಾಹಿತಿ ಮತ್ತು ಮನೋವೈಜ್ಞಾನಿಕ ಪಾಶ್ವಚಿತ್ರ (ಪ್ರೊಫೈಲ್) ಆಧರಿಸಿ ತಯಾರಿಸಲಾದ ಪ್ರಚಾರ, ಸಾಮಾಜಿಕ ಜಾಲತಾಣಗಳಲ್ಲಿ ನಿರ್ಧಿಷ್ಟ ಮತದಾರರನ್ನು ಗುರಿಯಾಗಿಸಿಕೊಂಡು ಅವರವರ ಅಭಿರುಚಿಗೆ ತಕ್ಕಂತೆ ಅವರ ಗೋಡೆಗಳ ಮೇಲೆ ಗೋಚರಿಸುವಂತೆ ಮಾಡಲಾಗುತ್ತದೆ. ಇಂತಹ ತಂತ್ರಗಾರಿಕೆಯಿಂದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ಗೆಲ್ಲಲಾಯಿತೆಂದು ಹೇಳಲಾಗುತ್ತಿದೆ. ಭಾರತದಂತಹ ದೇಶದಲ್ಲಿ ಪ್ರತಿವರ್ಷ ಒಂದಿಲ್ಲೊಂದು ರಾಜ್ಯದಲ್ಲಿ ಚುನಾವಣೆ ನಡೆದೇ ಇರುತ್ತದೆ,ಹಾಗಾಗಿ  ಕೇಂಬ್ರಿಜ್ ಎನಲೆಟೀಕಾದ೦ತಹ ಕಂಪನಿಗಳಿಗೆ ಒಂದು ದೊಡ್ಡ ಹಬ್ಬ! ಈ ರೀತಿ ಅನೈತಿಕವಾಗಿ ಫೇಸ್ಬುಕ್ ಬಳಕೆದಾರರ ಮಾಹಿತಿ ಕದಿಯುವದು ಅಕ್ಷಮ್ಯ ಅಪರಾಧ. ಫೇಸ್ಬುಕ್ ಈಗ ಕೇವಲ ನಮ್ಮ ಭಾವಚಿತ್ರ,ಪೋಸ್ಟ್ಗಳನ್ನು,ವಿಚಾರಗಳನ್ನು ಹಂಚಿಕೊಳ್ಳುವ ಮತ್ತು ಬಂಧು ಮಿತ್ರರೊಂದಿಗೆ ಸಂಪರ್ಕದಲ್ಲಿರುವ ಒಂದು ಜಾಲತಾಣವಾಗಿ ಉಳಿದಿಲ್ಲ. ಫೇಸ್ಬುಕ್ ವಿವಿಧ ದೇಶಗಳಲ್ಲಿ ಸರಕಾರಗಳನ್ನು ಅಧಿಕಾರಕ್ಕೆರಿಸುವ ಮತ್ತು ಅಧಿಕಾರದಿಂದಿಳಿಸುವ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ಒಂದು ಜಾಗತಿಕ ಶಕ್ತಿಯಾಗಿ (ಗ್ಲೋಬಲ್ ಪವರ್) ಹೊರಹೊಮ್ಮುತ್ತಿದೆ.ಯಾವ ದೇಶದ ಚುನಾವಣೆಯಲ್ಲಿ ಯಾವ ವಿಷಯ ಪ್ರಮುಖವಾಗುತ್ತದೆ ಎಂಬುದನ್ನೂ, ಆಯಾ ದೇಶದಲ್ಲಿ ತನ್ನ ಕಕ್ಷಿದಾರ ರಾಜಕೀಯ ವ್ಯಕ್ತಿಗಳಿಗೆ ಅನುಕೂಲವಾಗುವ ಮತ್ತು ವಿರೋಧಿಗಳಿಗೆ ಪ್ರತೀಕೂಲವಾಗುವ ನಕಲಿ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇದೆಲ್ಲಕ್ಕೂ ಆಧಾರ ನಮ್ಮೆಲ್ಲರ ಫೇಸ್ಬುಕ್ ಖಾತೆಯಿಂದ  ಕದಿಯಲ್ಪಟ್ಟ  ದತ್ತಾಂಶ!

ಸೈಬರ್ ತಜ್ಞ ಪವನ ದುಗ್ಗಲ್ ಹೇಳುವಂತೆ ಇಂತಹ ದತ್ತಾಂಶ ಕದಿಯುವದನ್ನು ತಡೆಯಲ್ಲಿ ನಮ್ಮ ದೇಶದಲ್ಲಿ ಯಾವುದೇ ಕಾನೂನುಗಳಿಲ್ಲ ಮತ್ತು ಕದ್ದ ದತ್ತಾಂಶದ ಸಹಾಯದಿಂದ ಫೇಸ್ಬುಕ್ನ ಅಲ್ಗೊರಿತಮ್ಗಳನ್ನು ಬದಲಿಸಿ ನ್ಯೂಸ ಫೀಡ್ ಮುಖಾಂತರ ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ತಕ್ಕಂತೆ ನಕಲಿ ವಾತಾವರಣ ಸೃಷ್ಟಿಸಿವದನ್ನು ತಡೆಯುವದು ಅಷ್ಟು ಸುಲಭವಲ್ಲ. ಇಲ್ಲಿ ಒಬ್ಬ ವ್ಯಕ್ತಿಗೆ ಒಂದು ವಿಷಯದ ಇನ್ನೊಂದು ಮಗ್ಗುಲನ್ನು ಅರಿಯಲು ಸಾಧ್ಯವೇ ಆಗುವದಿಲ್ಲ!  ನಾವು ತಿನ್ನುವ ಆಹಾರ,ನಮ್ಮ ಆಯ್ಕೆಯ ಚಲನಚಿತ್ರಗಳು,  ನೆಚ್ಚಿನ ತಾಣಗಳು,ಶಾಪಿಂಗ್ ತಾಣಗಳು, ನಾವು ಇಷ್ಟಪಡುವ ಮತ್ತು ವಿರೋಧಿಸುವ ವಿಷಯಗಳು  ಮತ್ತು ವ್ಯಕ್ತಿಗಳ ವಿವರಗಳ ಮಾಹಿತಿ ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳ ತಿಜೋರಿಯಲ್ಲಿ ಕೈದಾಗಿದೆ. ದತ್ತಾಂಶ ಸುರಕ್ಷತೆಯ ಕಾನೂನು ಇಲ್ಲದಿರುವದರಿಂದ ಲಂಗುಲಗಾಮಿಲ್ಲದೆ ಈ ಮಾಹಿತಿಯ ದುರುಪಯೋಗವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಸಾಮಾಜಿಕ ಮೋಸಗಾರಿಕೆಯಿಂದ ಬೇಸತ್ತು  “ಡೀಲೀಟ ಫೇಸ್ಬುಕ್” ಕ್ಯಾಂಪೇನ್ ಕೂಡ ಪ್ರಾರಂಭವಾಗಿದೆ! ಕೋಟಿಗಟ್ಟಲೆ ಫೇಸ್ಬುಕ್ ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಯನ್ನು ಅಳಿಸಿಹಾಕುವ ತಯಾರಿಯಲ್ಲಿದ್ದಾರೆ!! 
        
ಸಿಂಗಾಪುರದ ಸಂಸದೀಯ ಸಮಿತಿಯೊಂದು 22 ಮಾರ್ಚ್ 2018ರಂದು ಫೇಸ್ಬುಕ್,ಟ್ವಿಟರ್,ಗೂಗಲ್ನ ಅಧಿಕಾರಿಗಳನ್ನು ಫೇಕ್ ನ್ಯೂಸ್ ಕುರಿತಾದ ಚರ್ಚೆಗೆ ಸಿಂಗಾಪುರನ ಸಂಸತ್ಗೆ ಅವ್ಹಾನಿಸಿತ್ತು. ಸಮಿತಿಯ ಸದಸ್ಯರು ಫೇಸ್ಬುಕ್ನ ಅಧಿಕಾರಿಯನ್ನು  ಕೇಂಬ್ರಿಜ್ ಎನಲೆಟೀಕಾ ಕುರಿತಾಗಿ ಪ್ರಶ್ನಿಸಿದಾಗ, ಆ ಅಧಿಕಾರಿ ಉತ್ತರ ನೀಡದೆ ಜಾರಿಕೊಳ್ಳಲು ಯತ್ನಿಸಿದ.ಆಗ ಸಿಂಗಾಪುರದ ಭಾರತೀಯ ಮೂಲದ ಗ್ರಹ ಮಂತ್ರಿ ಷಣ್ಮುಗಮ್ ಅಧಿಕಾರಿಗೆ ಛೀಮಾರಿ ಹಾಕಿ ಫೇಸ್ಬುಕ್ ನ೦ಬುಗೆಯ ಪಾಲುದಾರನಾಗಿರಬೇಕಾದರೆ  ಕೇಳಿದ ಪ್ರಶ್ನೆಗೆ ನೇರವಾಗಿ ಜವಾಬ್ದಾರಿಯುತವಾಗಿ ಉತ್ತರಿಸುವಂತೆ ಇಲ್ಲವಾದಲ್ಲಿ ಕಠಿಣಕ್ರಮ ಎದುರಿಸುವಂತೆ ತಾಕೀತು ಮಾಡಿದರು. ಕೇಂಬ್ರಿಜ್ ಎನಲೆಟೀಕಾದ ಮಾಜಿ ಉದ್ಯೋಗಿ ಕ್ರಿಸ್ಟೋಫರ್ ವ್ಯಾಲಿ ಭಾರತದ ರಾಜಕೀಯ ಪಕ್ಷವೊಂದನ್ನು ಹೆಸರಿಸಿ, ಅದು ಕೇಂಬ್ರಿಜ್ ಎನಲೆಟೀಕಾದ ಕಕ್ಷಿದಾರನಾಗಿತ್ತೆಂದು ಹೇಳಿ, ಆ ಪಕ್ಷಕ್ಕೆ ಮುಜುಗುರ ಉಂಟುಮಾಡಿದ್ದಾರೆ.ತೀರ ನಿನ್ನೆಯಷ್ಟೇ ಬೆಳಕಿಗೆ ಬಂದ ಸಂಗತಿಯೆಂದರೆ ಸಿಕ್ರೇಟ್ಸ್ ಆಫ್ ಸಿಲಿಕಾನ್ ವ್ಯಾಲಿ” ಎಂಬ ಸಾಕ್ಷ ಚಿತ್ರದಲ್ಲಿ ‘ಕೇಂಬ್ರಿಜ್ ಎನಲೆಟೀಕಾದ ಮಾಜಿ ಸಿ.ಈ.ಓ.ರ ಲಂಡನ್ ಕಚೇರಿಯಲ್ಲಿ ಭಾರತದ ರಾಜಕೀಯ ಪಕ್ಷವೊಂದರ ಚಿಹ್ನೆಯುಳ್ಳ ದೊಡ್ಡ ಚಿತ್ರವೊಂದು ಗೋಡೆಯ ಮೇಲೆ ಕಾಣಿಸಿಕೊಂಡದ್ದು! ಭಾರತ ಸರಕಾರವು ಫೇಸ್ಬುಕ್ ಕುರಿತು ಕಠಿಣ ಧೋರಣೆ ತಳಿಯುವ ಅವಶ್ಯಕತೆ ಇದೆ ಎಂಬ ಕೂಗು ಕೇಳಿ ಬರುತ್ತಿದ್ದಂತೆ, ಭಾರತ ಸರಕಾರ ಫೇಸ್ಬುಕ್ಗೆ ಭಾರತೀಯ ಪ್ರಜೆಗಳ ದತ್ತಾಂಶದ ಸುರಕ್ಷತೆ ಮತ್ತು ಸೋರಿಕೆಯ ಕುರಿತು ಹಲವು ಪ್ರಶ್ನೆಗಳಿಗೆ 7 ದಿನಗಳಲ್ಲಿ ಉತ್ತರಿಸುವಂತೆ ನೋಟಿಸ್ ನೀಡಿದೆ. ಮುಂದಿನ ದಿನಗಳಲ್ಲಿ ದೇಶ ದೇಶಗಳ ಮಧ್ಯದ ಬೇಹುಗಾರಿಕೆಯೂ ಕೂಡ ಫೇಸ್ಬುಕ್ನ ದತ್ತಾಂಶವನ್ನು ಆಧರಸಿಯೇ ನಡೆದರೆ ಅಚ್ಚರಿ ಇಲ್ಲ! ಯಾವುದೇ ಹೆಚ್ಚಿನ ಅಪಾಯವಿಲ್ಲದೇ ದೊರಕುವ ದತ್ತಾಂಶಕ್ಕೆ ಲಗ್ಗೆ ಇಡಲು ಬೇಹುಗಾರಿಕಾ ಸಂಸ್ಥೆಗಳು ಸಹಜವಾಗಿಯೇ ತುದಿಗಾಲಮೇಲಿರುತ್ತವೆ. ಒಮ್ಮೆ ಸಾರ್ವಜನಿಕವಾದ ನಮ್ಮ ಮಾಹಿತಿ ನಮ್ಮ ದೌರ್ಬಲ್ಯವೂ ಆಗಬಹುದು. ದತ್ತಾಂಶ ಕದಿಯುವಿಕೆ ಮತ್ತು ದುರುಪಯೋಗದ ಮಿತಿ/ಪರಿಣಾಮ/ಅನಾಹುತ ನಮ್ಮ ಊಹೆಗೂ ಮೀರಿದ್ದು! ನಮ್ಮ ದತ್ತಾಂಶದ ಸುರಕ್ಷತೆಯ ಹೊಣೆಗಾರಿಕೆ ಕುರಿತು ನಾವೂ ಎಚ್ಚೆತ್ತುಕೊಂಡು ಸರಕಾರದ ಮೇಲೂ ಒತ್ತಡ ಹೇರಬೇಕು.ಅಚ್ಚರಿಯೆಂದರೆ ನಮ್ಮ ದೇಶದಲ್ಲಿ ಆಧಾರದ ದತ್ತಾಂಶ ಸೋರಿಕೆಯಾಗುತ್ತದೆಂದು ಗುಲ್ಲೆಬ್ಬಿಸಿ ನ್ಯಾಯಾಲಯದ ಕಟಕಟೆ  ಏರಿದ್ದಾರೆ, ಆದರೆ ಫೇಸ್ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಿಂದ ಸೋರಿಕೆಯಾಗುವ ಮಾಹಿತಿ ಕುರಿತು ಚಕಾರವೆತ್ತುತ್ತಿಲ್ಲವೆಂಬುದು ವಿಪರ್ಯಾಸ!!


Tuesday, 27 March 2018

Trekkers, Scientific community and the villagers in ambience (The untold success story of ‘Kadagarni’ village)



Original Kannada Article & photos: Mahantesh .G. Oshimath 

English Translation: Shrinivas N Panchamukhi


Trekking is nothing less than a meditation for nature lovers. One can learn to live with nature & know more about nature by means of trekking. Of late the trekking activities in India have increased & this would certainly enhance the awareness & education about Mother Nature. Many organizations like Youth Hostels Association of India (YHAI) , General Thimmayya National Academy of Adventures(GHETNAA), Department of Atomic Energy’s Sports & Cultural Council, Mysore’s Nisarga trekkers club ,have been active in organising systematic treks & adventures. It is really amazing that the Department of Atomic Energy, an organisation leading the pursuit of excellence in the field of Science & Technology, has been conducting/organising national level trekking expedition for last 29 years, which shows the genuine concern towards the nature. The trekking expedition named “Girisanchar” began in 1990 with few enthusiastic scientists and has now become a regular calendar event covering length and breadth of the country, each time in a different route & different terrain. The trek route of DAE event has never been repeated, a feat not many in the field of trekking have accomplished ! In Karnataka the DAE trek has been conducted on three occasions, all of these have been immensely thrilling & naturally romantic in the tough terrains. These treks covered the biodiversity hot-spots of the world; Anashi, Caves of Ulavi , Mahamane, Satoddi Falls , Vibhuti Falls, Yana in the Western Ghats , Muttoddi in the Bhadra Forest and the icing on the cake was Mullayyanagiri the highest peak of Karnataka & the complicated route of Bababudanagiri. In Girisanchar a team consisting of 35 members travels for 5 days continuously covering a distance of around 100 km. 8 such teams are flagged off from the base camp successively. The trekkers enjoy this enthralling experience of being with nature by experiencing the beauty of lush green forests, the flowing sound of the rivers, the water falls, and the wild life. Trekkers are made to stay in camps at various pre-decided locations. The trek can’t be successful without the aid of the tribes & the farmers residing in these deep forests. The organisers have put in huge efforts to ensure the active participation of the locals to make this event a hassle free one. I would like to spill beans on the life story of the village ‘Kadagarni’ & its resident tribes the ‘Kunabis’ who have been instrumental in making this 29th version of DAE trek a grand success. 

Historical meeting place of Sharanas at Kadagarni

The story of ‘Kadagarni’ dates back to the 12th century. Who can forget the revolution of the ‘sharanas’ (the followers of Basavanna) who fought for the principle of equality, religion of humanity and in the process tried to enlighten the society by their literary works in Karnataka. The coup at Kalyana threatened the very existence of master piece of literature the ‘Vachanas’, it would not be wrong if one calls them the Upanishads of Kannada. In order to protect the sanctity of “Vachana Sahitya” from the conspiracy and rhetoric of the hostile fundamentalists, the mass exodus of the group followers of Basavanna called “Sharanas” under the leadership of ‘Chanabasavanna’ from various directions began. During the course of their exodus many ‘Sharanas’ were martyred while fighting with the soldiers of ‘Kalchuri Kalyana ’. They eventually settled down in ‘Ulavi Dandakaranya’ of today’s Uttara Kannada district in Karnataka. In 12th century ‘Ulavi’ was under the rule of ‘Kadambas’ of Goa. The ‘Sharanas’ after a marathon discussion decided to settle down at ‘Ulavi’ . This place where the ‘Sharans’ held brain storming session came to be known as ‘Kadeyagani’ which later became ‘Kadagarni’. with the blessings from ‘Kadambas’ of Goa & under the leadership of ‘Channabasavanna’; Ulavi one of the world’s most important biodiversity sites thus became the saviour of the ‘Vachanas’ (simplified truths over myths of life), a great literary work created in ’Anubhava Mantap of Kalyana’. 

A hamlet with about 50 houses, located deep into the forest 4km away from Ulavi is ‘Kadagarni’ the story of which is about to unveil ! The most heartening and adorable fact of this village is that, one would never find a piece of plastic or the so called non-biodegradable waste materials of this mechanised era. The ‘Kunubi’ tribes/community forms the bulk of the population of ‘Kadagarni’. These villagers have been cultivating the 130 acres land that was owned by the ‘Ulavi’ temple administration till 1970. To preach about village life & its beauty is easy but to bring it into actual practise that too in this modern era of colourful distractions & attractions isn’t easy. In this regard the ‘Kunabis’ have actually been the role models for a long time. ‘Kadagarni’ under the ‘Ulavi panchayat’ is a model village which has a cleanly maintained toilet in each house. There can’t be a better advertising for ‘Swachha Gram-Swachha Bharath’ than ‘Kadagarni’.

The village of ‘Kadagarni’ has all the basic amenities such as clean drinking water, electricity, a big playground and an ‘anganawadi’ but the strength of ‘Kadagarni’ lies in the pride & self esteem of its people. The ‘Kunubis’ are very forthcoming & ambitious to be part of the system in various fields including education, politics, sports, agriculture etc. The entire village takes pride & draws inspiration from Narayan Rama Dadodkar a veteran of 68 years. His unique & unmatched physical fitness, eagerness & dedication towards his work can hardly be found in the youth of cities. Compelled by the economic condition of the family Narayan had to drop out from the school just after finishing 4th standard. He realised his dream by educating his children & grandchildren. The entire village has joined him in his endeavour of relentless pursuit of education. The students of ‘Kadagarni’ do their initial schooling at nearby village Henkola & then higher secondary in ‘Channabasaveshwar high school Ulavi’. Their journey of education continues as they embark to Karwar, Joida and Dandeli to complete their degrees & diplomas by staying in hostels. 

Kunabi’s of Kadagrani
Paddy has been the major crop of ‘Kadagarni’ & the ‘Kunubis’ are traditionally known to cultivate various varieties of paddy namely Intan, Poonam and Jira. Since last decade or so the ‘Kunubis’ have been successfully cultivating commercial crops such as black pepper, betel nut and ilachi (cardamom). One can find gardens with variety of vegetables and pulses in the courtyard of each home in ‘Kadagarni’. The real co-operative principle of life is at display in ‘Kadagarni’. Everyone lends helping hand to each of the resident of ‘Kadagarni’ in cleaning fields, sowing, cultivating and harvesting. The bricks used to build houses are manufactured locally & in order to be self reliant the youth of ‘Kadagarni’ have also learnt the art of carpentry & masonry. The people of ‘Kadagarni’ are idols to the modern society & one can learn a lot from them. Their socioeconomic prosperity is attributed to the fact of them being the residents of this holy land of ‘Sharnas’ and being true followers of the spirit of ‘Vachanas’ which emphasise the philosophy of ‘Work is Worship’. Many residents of ‘Kadagarni’ travel to Goa for fishing which earns them livelihood and they also work in the agricultural lands of nearby villages during their free time. Ananth who works in state office of ‘Kumbrawada’, Nilesh who works in post office of ‘Ulavi’, Bala who travels to nearby villages for selling vegetables and Sheela who works as guest teacher at ‘Henkola’ school, try their hand out in agriculture as well. These are the few examples for the dedication & workaholic attitude of people of ‘Kadagarni’. 
Paddy harvesting activity
Lalitha Ganapati Datodkar the vice-president of the ‘Ulavi’ Panchayat has been working tirelessly and striving hard for all-round development of ‘Kadagarni’. She is being guided by the panchayat president Manjunath Mokashi who is very proud of ‘Kadagarni’ being hovel-free village with population of about 450. Lalitha has chalked out a plan to develop bio-tourism in ‘Kadagarni’ in association with forest department. Lalitha is working towards realising her dream of making ‘Kadagarni’ an ‘Adarshgram’, by equipping it with a primary school, good roads, mobile hospital, community centre, library, stadium, and rainwater harvesting and drip irrigation facilities. She is also planning the daunting task of piping water supply to her village from ‘Kaneri’ river, by taking up the issue with the concerned authorities. 
Iron lady Lalitha Ganapati Datodkar of Kadagarni
It would not be an exaggeration if one says that ‘Kadagarni’ & the ‘Kunubis’ would leave behind a legacy as they proudly march ahead in contributing towards developed & harmonious India. ‘Kunubis’ also speak fluent ‘Kannada’ along with their mother tongue Konkani. They believe in & worship the God ‘Mallikarjuna’ of Canakon-Goa and they are also devotees of ‘Pandharapur Vitthala’ & the great scholar ’Channabasavanna’ of Ulavi. During this year’s DAE trekking they have proven that villagers & the scientific community can get along and move on hand in hand when it comes to preserving & protecting the environment. Hats off to the spirit of people of ‘Kadagarni’ .

Friday, 9 March 2018

“ಟೂ-ಜಿ, ಥ್ರೀ-ಜಿ, ಒನ್- ಟೂ- ಕಾ- ಫೋರ್-ಜಿ”




ಇಂಟರ್ನೆಟ್ ಮತ್ತು ಮೊಬೈಲ್ ಡಾಟಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇಂಟರ್ನೆಟ್ ಇಲ್ಲದ ಬದುಕನ್ನು ಊಹೀಸಿಕೊಳ್ಳುವದೂ ಅಸಾಧ್ಯ. ಇಂಟರ್ನೆಟ್ ಈಗ ಮೂಲಭೂತ ಸೌಲಭ್ಯಗಳಲ್ಲೊಂದಾಗಿ ಬಿಟ್ಟಿದೆ, ಭಾರತದಲ್ಲಿ ಸಾಮಾನ್ಯ ಜನತೆಗಾಗಿ ಅಂತರ್ಜಾಲ ಸೇವೆ ಪ್ರಾರಂಭವಾಗಿದ್ದು ಅಗಷ್ಟ ೧೫ ೧೯೯೫ರಂದು.ಆಗ ಲಭ್ಯವಿದ್ದ ಅಂತರ್ಜಾಲದ ವೇಗ ೯.೬ ಕೆ.ಬಿ.ಪಿ.ಎಸ್!! ಈಗಿನ ಯುಗದ ಇಂಟರ್ನೆಟ್ ವೇಗಕ್ಕೆ ಹೋಲಿಸಿದಾಗ ಇದು ನಗಣ್ಯ. ಆಗ ಕೇವಲ ೧೦೦೦೦ ಜನ ಇಂಟರ್ನೆಟ್ ಬಳಕೆದಾರರಿದ್ದರು ಮತ್ತು ಬಾಲಿವುಡ್ ನಟ  ದಿವಂಗತ ಶಮ್ಮಿಕಪೂರ್ ಇಂಟರ್ನೆಟ್ ಬಳಕೆದಾರರ ಕುಂದು ಕೊರತೆಗಳನ್ನು ಪರಿಹರಿಸಲು ಇಂಟರ್ನೆಟ್ ಬಳಕೆದಾರರ ಸಂಘವನ್ನೂ ಹುಟ್ಟು ಹಾಕಿದ್ದರು. ೨೩ ವರ್ಷ ಕಳೆದರೂ ಇಂಟರ್ನೆಟ್ ಸೇವೆ ನೀಡುವ ಕಂಪನಿಗಳ ಲಾಭದಲ್ಲಿ ಕಂಡು ಬಂದ ಗಣನೀಯ ಏರಿಕೆಗೆ ಹೋಲಿಸಿದಾಗ ಇಂಟರ್ನೆಟ್ನ ವೇಗ ಮತ್ತು ಗುಣಮಟ್ಟದಲ್ಲಿ ಕ್ರಾಂತಿಕಾರಿ ಬೆಳವಣಿಗಳೇನು ಆಗಲಿಲ್ಲ

ಒಬ್ಬ ಅಶಕ್ತ ರೋಗಿಷ್ಟ ಮನುಷ್ಯನನ್ನು ಪೈಲವಾನ್ ಅಂತ ಕರೆದರೆ, ನಮಲ್ಲಿ ಬಹಳಷ್ಟು ಜನ ಹಾಗೆ ಹೇಳಿದವನನ್ನು  ಮೂರ್ಖ ಅ೦ತಾರೆ ಅಥವಾ ಬಹುಶಃ ಆ ಅಶಕ್ತ ವ್ಯಕ್ತಿಯನ್ನು ಅಪಹಾಸ್ಯ ಮಾಡುತ್ತಿರಬೇಕೆಂದುಕೊಳ್ಳುತ್ತಾರೆ, ನಮ್ಮ ದೇಶದಲ್ಲಿ ಅಂತರ್ಜಾಲದ ವೇಗದ ವಿಷಯದಲ್ಲಿ ನಮ್ಮ ವ್ಯವಸ್ಥೆ ದೇಶವಾಸಿಗಳ ತಾಳ್ಮೆಯ ಪರೀಕ್ಷೆಮಾಡುತ್ತಾ  ಅವರನ್ನು ನಗೆಪಾಟಲಿಗೀಡುಮಾಡಿದೆ. ಭಾರತದಲ್ಲಿ ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರನ ಬವಣೆ ಇಂಟರ್ನೆಟ್ನ ಗತಿಹೀನ ವೇಗ ಮತ್ತು ಸದಕಾಲದ ಬಫರಿಂಗ್ನ ಕಿರಿಕಿರಿ. ಅಮೆರಿಕದಲ್ಲಿ ಬ್ರಾಡ್ ಬ್ಯಾಂಡ್ ವೇಗದ ಬೆಂಚ್ಮಾರ್ಕ್ (ಸಾಕ್ಷಿಗಲ್ಲು) ೨೫ಎಂ.ಬಿ.ಪಿ.ಸ್. ಆದರೆ ನಮ್ಮ ದೇಶದಲ್ಲಿ ಈ ಬೆಂಚ್ಮಾರ್ಕ್ (ಸಾಕ್ಷಿಗಲ್ಲು) ೫೧೨ ಕೆ.ಬಿ.ಪಿ.ಎಸ್.ನಮ್ಮ ದೇಶದಲ್ಲಿ ಸಂಪರ್ಕ ಕ್ರಾಂತಿಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಲಾಗುತ್ತದೆ ವಿಪರ್ಯಾಸ ಅಂದರೆ  ಇ೦ದು ಇಂಟರ್ನೆಟ್ ವೇಗ ಇರುವೆಯ ಚಲನೆಯ ವೇಗಕ್ಕಿಂತ ಕಡಿಮೆ ಇದೆ. ಇದು ಉತ್ಪ್ರೇಕ್ಷೆಯಲ್ಲ ನಮ್ಮ ದೇಶದ ಅಂತರ್ಜಾಲ ವೇಗದ ದುರ್ದಶೆಗೆ ಹಿಡಿದ ಕನ್ನಡಿ! ನಮ್ಮ ದೇಶದಲ್ಲಿ ಇಂಟರ್ನೆಟ್ ಸೌಲಭ್ಯ  ಒದಗಿಸುವ ಕಂಪನಿಗಳು ಆಕರ್ಷಕ ಜಾಹಿರಾತುಗಳನ್ನು ತೋರಿಸಿ,  ಅವುಗಳ ನೆಟ್ವರ್ಕ್ ಹಿಮಾಲಯದ ಉತ್ತುಂಗದಲ್ಲಿಯೂ!!, ಸಮುದ್ರದ ಮಧ್ಯದಲ್ಲಿಯೂ!  ನಿರಂತರವಾಗಿ ವೇಗವಾದ ಇಂಟರ್ನೆಟ್ ಸೇವೆ ನೀಡುತ್ತದೆ೦ದು ಜನರನ್ನು ಮರಳು ಮಾಡಿ ಮೂರ್ಖರನ್ನಾಗಿಸುತ್ತಿವೆ. ಇಂತಹ ಜಾಹೀರಾತುಗಳಲ್ಲಿ ಸುಳ್ಳಿನ ಕಂತೆ ತುಸು ಜಾಸ್ತಿನೆ... ಈ ಕಂಪನಿಗಳು ತಮ್ಮ ನೀರಸ, ಅಶಕ್ತ, ರೋಗಗ್ರಸ್ತ ಇಂಟರ್ನೆಟ್ ಸೇವೆಗಳಿಗೆ ಮಾರ್ಕೆಟಿಂಗ್ನ ಮಾದಕತೆಯ ಇಂಜೆಕ್ಷನ್ ನೀಡಿ ನಮ್ಮ ಮುಂದೆ ಪೈಲವಾನ್ರಂತೆ ತೋರಿಸಿ ಗ್ರಾಹಕರನ್ನು ಮೋಡಿ ಮಾಡಿ, ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ.ಇಂತಹ ಜಾಹೀರಾತುಗಳನ್ನು ತೋರಿಸಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿವೆ. ಇದನ್ನು ೪ಜಿಯ ಹೆಸರಿನಲ್ಲಿ ನಡೆಯುತ್ತಿರುವ ಫೋರ್ಜರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಜಗತ್ತಿನಾದ್ಯಂತ ಇಂಟರ್ನೆಟ್ ವೇಗದ ವಿಶ್ಲೇಷಣೆ ಮಾಡುವ ಸಂಸ್ಥೆ ಓಪನ್ ಸಿಗ್ನಲ್ನ ವರದಿಯಲ್ಲಿ ಉಲ್ಲೇಖಿಸಿದ ಮಾಹಿತಿ ನಮ್ಮ ದೇಶದ ಸಂಪರ್ಕ ಕ್ರಾಂತಿಯ ಬಣ್ಣದ ಮಾತುಗಳ ಬಣ್ಣ ಬಯಲು ಮಾಡುತ್ತದೆ. ೪ಜಿ ಎಲ್.ಟಿ.ಇ. ವೇಗದಲ್ಲಿ ಭಾರತ ೭೮ ದೇಶಗಳ ಪಟ್ಟಿಯಲ್ಲಿ ೭೬ನೇ ಕ್ರಮಾಂಕದಲ್ಲಿದೆ. ಭಾರತದಲ್ಲಿ ಸರಾಸರಿ ಫೋರ್-ಜಿ ವೇಗ ೬.೦೭ ಎಂ.ಬಿ.ಪಿ.ಎಸ್. ಅಚ್ಚರಿಯ ಸಂಗತಿಯೆಂದರೆ ಈ ವರದಿಯಲ್ಲಿ ಉಲ್ಲೇಖೀಸಿದಂತೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಇಂಟರ್ನೆಟ್ ವೇಗ  ಭಾರತಕ್ಕಿಂತಲೂ ಉತ್ತಮವಾಗಿದೆ, ಈ ಪಟ್ಟಿಯಲ್ಲಿ  ಪಾಕಿಸ್ತಾನ ೬೯ ಮತ್ತು ಶ್ರೀಲಂಕಾ ೬೪ನೇ ಕ್ರಮಾಂಕದಲ್ಲಿವೆ. ವಿಚಿತ್ರವಾದರೂ ಸತ್ಯವೆಂಬಂತೆ ಈ ಎರಡೂ ದೇಶಗಳಲ್ಲಿ ಇಂಟರ್ನೆಟ್ ವೇಗ ಭಾರತದ ಎರಡು ಪಟ್ಟಿದೆ!! ಈ ಪಟ್ಟಿಯಲ್ಲಿ ೪೪.೩ ಎಂ.ಬಿ.ಪಿ.ಎಸ್. ಇಂಟರ್ನೆಟ್ ವೇಗದೊಂದಿಗೆ  ಸಿಂಗಾಪುರ್ ಪ್ರಥಮ ಸ್ಥಾನದಲ್ಲಿ, ೪೨.೧ ಎಂ.ಬಿ.ಪಿ.ಎಸ್. ಇಂಟರ್ನೆಟ್ ವೇಗದೊಂದಿಗೆ  ನೆದರಲ್ಯಾಂಡ್ಸ್ ದ್ವಿತೀಯ ಸ್ಥಾನದಲ್ಲಿದೆ. ಭಾರತದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಅತ್ಯಂತ ತೀವ್ರ ಗತಿಯಲ್ಲಿ ೪ಜಿ ಇಂಟರ್ನೆಟ್ ಸೇವೆಯ  ವಿಸ್ತಾರವಾಗಿದೆ. ಜನರನ್ನು ಮೋಡಿ ಮಾಡಿ ಮಾಯಾಜಾಲದಲ್ಲಿ ಸಿಲುಕಿಸುವ ಜಾಹಿರಾತುಗಳು ಮತ್ತು ಉಚಿತ ಸೇವೆಯ ಆಸೆ  ತೋರಿಸಿ ಮೊಬೈಲ್ ಕನೆಕ್ಷನ್ಗಳನ್ನು ಮಾರಲಾಗುತ್ತದೆ. ಈ ಮೋಹಕ ಮಾಯಾಜಾಲದ ವಿಸ್ಮಯ ಲೋಕದಲ್ಲಿ  ದೇಶದ ಕೇವಲ ಸಾಮಾನ್ಯ ಜನರಷ್ಟೇ ಅಲ್ಲ ಪ್ರತಿಷ್ಟಿತರು, ದೊಡ್ಡವರು, ಹೆಸರಾಂತರೂ ಸಿಕ್ಕಿ ಹಾಕಿಕೊಂಡು ಅಸಹಾಯಕರಾಗಿದ್ದಾರೆ. ಇಂಟರ್ನೆಟ್ನ ಆಮೆ ವೇಗಕ್ಕೆ ಬೇಸತ್ತು  ಶತಮಾನದ ಮಹಾನಾಯಕ, ಬಾಲಿವುಡ್ನ ಶಹನಷಾ ಅಮಿತಾಬಚ್ಚನ ನೆಟ್ವರ್ಕ್ ಕ್ಷೇತ್ರದಿಂದ ಹೊರಗುಳಿದು,  ಟ್ವಿಟ್ಟರ್ನಲ್ಲಿ ತಮ್ಮ ಗೋಳನ್ನು/ಅಸಹಾಯಕತೆಯನ್ನು ಜನೇವರಿ ೧೫ ರಂದು ಟ್ವೀಟೊಂದರ ಮುಖಾಂತರ ಈ ರೀತಿಯಾಗಿ ತೋಡಿಕೊಂಡಿದ್ದಾರೆ ”ಆಲ್ ಧಿಸ್ ಟಾಕ್ ಐಂಡ್ ಮಾರ್ಕೆಟಿಂಗ್ ಆಫ್ ಥ್ರೀಜಿ,ಫೋರ್ಜಿ, ಹಾಂಜಿ, ನೋಜಿ,ಸೋಚೋಜಿ,ಚಲೋಜಿ,ನಂಥಿಂಗ್ ವರ್ಕ್ಸ್! ಇಂಟರ್ನೆಟ್ ಟೇಕ್ಸ್ ಎಟರ್ನಿಟಿ ಟು ಕನೆಕ್ಟ್.... ಕಾಲ್ಸ್ ಡ್ರಾಪ್, ಕಾಲ್ಸ್ ಡಿಸ್ಕನೆಕ್ಟ್, ಅನ್ ಅನೌನ್ಸಡ್ ಮಿಜರಿ ಐಂಡ್ ಆಲ್ ಕ್ಲೇಮ್ಸ್ ಆಫ್ ಸ್ಪೀಡ್ ಐಂಡ್ ಕನೆಕ್ಟಿವಿಟಿ ಆರ್ ರಬ್ಬಿಶ್.” (All this talk & marketing of 3g,4g, haan ji, no ji, socho ji, chalo ji nothing works ! Internet takes eternity to connect, calls drop, calls disconnect, and unannounced misery and all claims of speed and connectivity are rubbish”). ಅಮಿತಾಬಚ್ಚನರ೦ಥ ಸಿಲೆಬ್ರಿಟಿಯ ಪರಿಸ್ಥಿತಿ ಹೀಗಾದರೆ ಇನ್ನು ಸಾಮಾನ್ಯ ಜನರ ಪಾಡೇನು!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೆ ನಾವು ಇಂಟರ್ನೆಟ್ನ್ನು ಅವಲಂಬಿಸಿದ್ದೇವೆ.ಇಂಟರ್ನೆಟ್ ಮತ್ತು ಸಾಮಾಜಿಕ-ಜಾಲತಾಣರಹಿತ  ಬದುಕು ದುಸ್ತರ ಅನ್ನುವಷ್ಟರ ಮಟ್ಟಿಗೆ ನಾವು ಅಂತರ್ಜಾಲದ ಗುಲಾಮರಾಗಿದ್ದೇವೆ. ಆದರೆ ಬಸವನ ಹುಳುವಿನ ವೇಗದ ಇಂಟರ್ನೆಟ್ ಸೇವೆ ಜನತೆಯನ್ನು ಬಸವಳಿಸಿದೆ.  ಇಂಟರ್ನೆಟ್ ಸ್ಪೀಡ್ನ ಹೆಸರಿನಲ್ಲಿ ನಡೆಯುತ್ತಿರುವ ಬ್ರಷ್ಟಾಚಾರಕ್ಕೆ ಪರಿಹಾರ ನಮ್ಮ ದೇಶದ ಸರಕಾರ ಅಥವಾ ವ್ಯವಸ್ಥೆಗಳಲ್ಲಿ ಇಲ್ಲ. ಕಳಪೆ ವೇಗದ ಸೇವೆ ನಿಡುತ್ತೀರುವ ಇಂಟರ್ನೆಟ್ ಕಂಪನಿಗಳ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.       ಭಾರತದಲ್ಲಿಯ ೪೬ ಕೋಟಿ ಇಂಟರ್ನೆಟ್ ಬಳಕೆದಾರರ ವ್ಯಥೆಯ  ಕತೆ/ಗೋಳನ್ನು ಕೇಳುವವರೇ ಇಲ್ಲ. ಎಲ್ಲಿಯವರೆಗೆ ಭಾರತದಲ್ಲಿ ಇಂಟರ್ನೆಟ್ ಸ್ಪೀಡ್ನ್ನೂ ಸರಕಾರವಾಗಲಿ, ಸೌಲಭ್ಯ ಒದಗಿಸುವ ಕಂಪನಿಗಳಾಗಲಿ ಗಂಭೀರವಾಗಿ ಪರಿಗಣಿಸುವದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿಯೂ ಬಫರಿಂಗ್ ಮೋಡ್ನಿಂದ ಹೊರ ಬರುವದು ಕಷ್ಟ. ದುಡ್ಡು ಕೊಟ್ಟು ಗುಣಮಟ್ಟದ  ಇಂಟರ್ನೆಟ್ ಸೇವೆ ಪಡೆದು ಕೊಳ್ಳುವದು ಗ್ರಾಹಕಾರದ ನಮ್ಮೆಲ್ಲರ ಮೂಲಭೂತ ಹಕ್ಕು. ನಮಗೆ ಆಧಾರ ಕಾರ್ಡ್ನ ಮಾಹಿತಿ ಸೋರಿಕೆಯಾಗಿ ಖಾಸಗಿತನ ಹರಣವಾಗುವದೆಂದು  ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಮತ್ತು ಖಾಸಗಿತನವನ್ನು ಒಂದು ಮೂಲಭೂತ ಹಕ್ಕನ್ನಾಗಿಸುಕೊಳ್ಳುವದು ಗೊತ್ತು. ಇದೇ ಮುತುವರ್ಜಿಯನ್ನು ೪ಜಿ ವೇಗದ ಹೆಸರಿನಲ್ಲಿ ಇಂಟರ್ನೆಟ್ ಕಂಪನಿಗಳು ನಡೆಸುತ್ತಿರುವ ಕಾಳದಂಧೆ ವಿರುದ್ಧ ಧ್ವನಿ ಎತ್ತುವಲ್ಲಿ ನಾವು ತೋರುವದಿಲ್ಲ.  ೧೯೯೫ರಲ್ಲೇ ಇಂಟರ್ನೆಟ್ ಬಳಕೆದಾರರ ಸಂಘವನ್ನು ಹುಟ್ಟು ಹಾಕಿದ ದಿವಂಗತ ಶಮ್ಮಿಕಪೂರ್ರ ಹಾದಿಯಲ್ಲಿ ಸಾಗಿ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಕಾರ ಮತ್ತು ಇಂಟರ್ನೆಟ್ ಕಂಪನಿಗಳ ಕಿವಿ ಮುಟ್ಟುವಂತೆ ಮಾಡಿ  ಇಂದಿನ ಸಿಲೆಬ್ರಿಟಿಗಳು ಸಾಮಾನ್ಯ ಜನರಿಗೆ ದಾರಿದೀಪವಾಗಬೇಕು.